ಪುಣೆ -ಎರ್ನಾಕುಲಮ್ ಸೂಪರ್ ಫಾಸ್ಟ್ ಟ್ರೈನಿಗೆ(no: 221149-150)ಉಡುಪಿ ನಿಲುಗಡೆ ಮುಂದುವರಿಸಲಾಗಿದೆ .

ಮೂರು ವರ್ಷದ ಹಿಂದೆ ಪುಣೆಯ ಕನ್ನಡಿಗರ ಬಹುದಿನದ ಬೇಡಿಕೆಯನ್ನು ರೈಲ್ವೆ ಮನ್ನಿಸಿ ಮೇಲಿನ ಟ್ರೈನ್ ಆರಂಭಿಸಿತು . ಈ ಟ್ರೈನಿಗೆ ಅತ್ಯಂತ ಮಹತ್ವದ ಉಡುಪಿಯಲ್ಲಿ ನಿಲುಗಡೆ ಕೊಡದೆ ಅನ್ಯಾ ಯವೆಸಗಿತ್ತು. ಈ ರೈಲಿಗೆ ಕೇರಳದಲ್ಲಿ ಎಂಟು ಮತ್ತು ಮಹಾರಾಷ್ಟ್ರದಲ್ಲಿ ಎರಡು ಮತ್ತು ಕರ್ನಾಟಕದಲ್ಲಿ ಕೇವಲ ಒಂದು ( ಮಂಗಳೂರು ) ನಿಲು ಗಡೆ ಯಿತ್ತು. ಮಹಾರಾಷ್ಟ್ರದ ಜನತೆಯ ಒತ್ತಡಕ್ಕೆ ಮಣಿದು ಮೂರು ಹೆಚ್ಚಿನ ನಿಲು ಗಡೆ ನೀಡಲಾಯಿತು . ಪುಣೆಯ ತುಳು ಕನ್ನಡಿಗರ ಸತತ ಆಗ್ರಹ ವನ್ನು ಎರಡು ವರ್ಷಗಳ ನಂತರ ಉಡುಪಿಯ ಅಂದಿನ ಶಾಸಕ ರಘುಪತಿ ಭಟ್ , ಉಡುಪಿ ರೈಲ್ವೆ ಪ್ರವಾಸಿ ಸಂಘದ ಶ್ರೀ ಡಯಾಸ್ ಹಾಗು ಪುಣೆಯ ಕನ್ನಡ ತುಳು ಸಂಘಗಳ ನಿರಂತರ ಶ್ರಮದಿಂದ ಆರಂಭಗೊಂಡ ನಿಲು ಗಡೆ ಯನ್ನು ಏಕಾಏಕಿಯಾಗಿ ಇದೇ ಸೆಪ್ಟೆಂಬರ್ ಒಂದರಿಂದ ರದ್ದು ಪಡಿಸುವ ಆದೇಶವನ್ನು ಪ್ರಕಟಿಸಿತು .

ಈ ಬಗ್ಗೆ ರೈಲ್ವೆ ಮಂತ್ರಿ ಶ್ರೀ ಸದಾನಂದ ಗೌಡರ ಗಮನಕ್ಕೆ ಪುಣೆಯ ಕನ್ನಡ ತುಳು ಜನರ ಪರವಾಗಿ ಉಡುಪಿಯ ರೈಲ್ವೆ ಪ್ರವಾಸಿ ಸಂಘದ ಅಧ್ಯಕ್ಷರ ಜೊತೆಗೂಡಿ ತಕ್ಷ ಣ ಮನವಿಯನ್ನು ರವಾನಿಸಿ ಉಡುಪಿ ನಿಲುಗಡೆಯನ್ನು ಮುಂದುವರಿಸಲು ಆಗ್ರಹಿಸಲಾಯಿತು . ಕೊಂಕಣ ರೈಲ್ವೆ ಈ ಮನವಿಯನ್ನು ಮನ್ನಿಸಿ ನಿಲು ಗಡೆ ಯನ್ನು ಮುಂದುವರಿಸಿದ್ದು ಜನತೆಯ ಪರ ಆದೇಶ ಕಳುಹಿಸಿರುತ್ತದೆ .

ಪುಣೆಯಿಂದ ಉಡುಪಿ ಮತ್ತು ಆಸುಪಾಸಿನ ಜನತೆ ಈ ನಿಲುಗಡೆಯನ್ನು ಉಪಯೋಗಿಸಿ ಕೊಂಡು ಸಹಕರಿಸಿದಲ್ಲಿ ಮುಖ್ಯವಾಗಿ ಹಿರಿಯನಾಗರಿಕರಿಗೆ ಚಿಕ್ಕಮಕ್ಕಳ ಜೊತೆ ಪ್ರಯಾಣಿಸುವ ಪ್ರವಾಸಿಗಳಿಗೆ ತಮ್ಮ ಊರು ತಲಪಲು ವೆಚ್ಚ ಕಡಿಮೆಯಾಗಿ ಪ್ರವಾಸ ಆರಾಮದಾಯಕ ವಾಗಲಿದೆ.

ಈ ಸೌಲಭ್ಯವನ್ನು ರೈಲ್ವೆ ಹಾಗು ಪ್ರವಾಸಿಗಳಿಗೆ ಆದಾಯವಾಗುವ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ಮುಂದಕ್ಕೆ ಪುಣೆಯಿಂದ ಮಂಗಳೂರಿಗೆ ಕೊಂಕಣ್ ರೈಲ್ವೆ ಯಿಂದ ನೇರ ಗಾಡಿಯನ್ನು ಆರಂಭಿಸುವ ಬಗ್ಗೆ ಪ್ರಯತ್ನ ಮಾಡಲು ಅನುಕೂಲ ವಾಗುತ್ತದೆ.

ದಯವಿಟ್ಟು ಪುಣೆಯ ತುಳು ಕನ್ನಡಿಗರು ಮತ್ತು ಉಡುಪಿಯ ನಾಗರಿಕರು ಸಹಕರಿಸಬೇಕಾಗಿ ಅಪೇಕ್ಷೆ.ರಾಮದಾಸ್ ಆಚಾರ್ಯ,ಜನಸಂಪರ್ಕಾಧಿಕಾರಿ ,ಕನ್ನಡ ಸಂಘ ,ಪುಣೆ.ದೂರಧ್ವನಿ :020-25436893

ಮಾಜಿ ರಾಷ್ಟ್ರಪತಿ ಡಾ ಅಬ್ದುಲ್ ಕಲಾಮ್ ಅವರ ಕನ್ನಡ ಸಂಘದ ಕಾವೇರಿ ವಿದ್ಯಾಸಮೂಹ ಕ್ಕೆ ಭೇಟಿ .

ಕನ್ನಡ ಸಂಘದ ಆಹ್ವಾನವನ್ನು ಸ್ವೀಕರಿಸಿ ಮಾನ್ಯ ಅಬ್ದುಲ್ ಕಲಾಮ್ ಅವರು ಸೆಪ್ಟೆಂಬರ್ ೧೫ರಂದು ಮಧ್ಯಾಹ್ನ ೧೨ಘಂಟೆಗೆ ಕಾವೇರಿ ವಿದ್ಯಾ ಸಮೂ ಹದ ವಿದ್ಯಾರ್ಥಿಗಳನ್ನು ಸಂಭೋದಿಸಿ ಅವರ ಜೊತೆಗೆ ಸಂಭಾಷಣೆಯನ್ನು ನಡೆಸಲಿರುವರು .

ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸದಸ್ಯರಿಗೆ ಆಸಕ್ತಿ ಇದ್ದಲ್ಲಿ ದಯವಿಟ್ಟು ತಮ್ಮ ಹೆಸರನ್ನು ಮುಂದಾಗಿ ತಿಳಿಸಬೇಕೆಂದು ವಿನಂತಿ .

ಒಂದು ಘಂಟೆಯ ಕಾರ್ಯಕ್ರಮ ಗಣೇಶ್ ನಗರದ ಕ್ರೀಡಾಂಗಣದಲ್ಲಿ ನಡೆಯಲಿದೆ .

ತಮ್ಮ ಹೆಸರು ವಿಳಾಸವನ್ನು ತಿಳಿಸಿ ದಿನಾಂಕ ೧೨ರ ಮೊದಲು ಈ ಕೆಳಗಿನ ವಿಳಾಸದಿಂದ ಮಾಹಿತಿ ಮತ್ತು ಪ್ರವೇಶ ಪತ್ರವನ್ನು ಪಡೆಯ ಬೇಕು .

ಸೀಮಿತ ಸ್ಥಳಾವಕಾಶದ ಕಾರಣ ಕೆಲವೇ ಸೀಟು ಗಳನ್ನು ಕಾದಿ ರಿಸಲಾಗಿದೆ .

ಸಂಪರ್ಕ :ಕನ್ನಡ ಸಂಘ , ಕಾರ್ಯಾಲಯ ,ಮೊದಲನೆಯ ಮಹಡಿ , ಗಣೇಶ್ ನಗರ , ಪುಣೆ ದೂರ ಧ್ವನಿ :020 25453973/25436893(ಶ್ರೀಮತಿ ರಶ್ಮಿ /ಕುಮಾರಿ ನೈನಾ )

IMG_2983

IMG_2983

IMG_2983

IMG_2984

IMG_2985

IMG_2986

IMG_2988

IMG_2989

IMG_2994

vinayakanand-2

vinayakanandji-2

felicitation-1 felicitation-2

ಕನ್ನಡ ಸಂಘ ಪುಣೆಯ ಪರವಾಗಿ ಪದ್ಮಶ್ರೀ ಡಾ. ಬಿ. ಆರ್ . ಶೆಟ್ಟಿಯವರಿಗೆ ಸತ್ಕಾರ .

ಅಬು ಧಾಬಿಯ ಪ್ರಸಿದ್ದ ಉದ್ಯೋಗಪತಿ ,ಸಮಾಜ ಸೇವಕ ಪ್ರಸಿದ್ಧ ಅನಿವಾಸಿ ಭಾರತೀಯ ಕನ್ನಡಿಗ ಪದ್ಮಶ್ರೀ ಡಾ ಬಿ ಆರ್ ಶೆಟ್ಟಿ ಯವರನ್ನು ಅವರು ದೇಶ ಹಾಗು ಪರದೇಶ ಗಳಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಗಾಗಿ ಪುಣೆ ಯ ಕನ್ನಡ ಸಂಘದ ಪರವಾಗಿ ಸತ್ಕರಿಸಿ ಗೌರವಿಸಲಾಯಿತು .

ಡಾ ಶೆಟ್ಟಿಯವರ ಬಾಲ್ಯದ ಸ್ನೇಹಿತ ,ಉಡುಪಿಯ ಬೋರ್ಡ್ ಹೈ ಸ್ಕೂಲಿ ನ ವರ್ಗಮಿತ್ರ ಹಾಗು ಪುಣೆಯ ಕನ್ನಡ ಸಂಘದ ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ ಇವರು ದುಬೈಯಲ್ಲಿ ಡಾ ಶೆಟ್ಟಿ ಯವರನ್ನು ಆತ್ಮೀಯ ಶೈಲಿಯಲ್ಲಿ ಸತ್ಕರಿಸಿದರು. ಕನ್ನಡ ಸಂಘ ಪುಣೆಯ ಇತ್ತೀಚಿಗೆ ನಡೆದ ಸುವಣ೯ಜಯಂತಿ ಸಮಾರೋಹದ ನನೆಪಿನ ಸ್ಮೃತಿ ಚಿನ್ಹೆ ಯನ್ನಿತ್ತು ಶ್ರೀ ಮತ್ತು ಶ್ರೀಮತಿ ಆಚಾರ್ಯ ಶ್ರೀ ಕೆ ಆರ್ ತಂತ್ರಿ ,ಕಾರ್ಯದರ್ಶಿ u a e ತುಳುಕೂಟ ಇವರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.

ದುಬೈ ಮತ್ತು ಅಬು ಧಾಬಿ ಯಲ್ಲಿ ಡಾ ಶೆಟ್ಟಿ ಯವರ ನೇತ್ರತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಕಳೆದ ೪೦ ವರ್ಷ ಗಳಿಂದ ನಡೆಸುತ್ತಿರುವ ಪ್ರಸಿದ್ಧ ಆಬು ಧಾಬಿ ಇಂಡಿಯನ್ ಸ್ಕೂಲ್,ಅಬು ಧಾಬಿ ಬ್ರೈಟ್ ರೈಡರ್ಸ್ ಅಂತರ್ರಾಸ್ಸ್ತ್ರೀಯ ಸ್ಕೂಲ್ ಹಾಗು ದುಬೈ ಯ ಪ್ರಸಿದ್ಧ diera ಅಂತರಾ ಷ್ಟ್ರೀ ಯ ಶಾಲೆಗಳನ್ನು ಡಾ ಶೆಟ್ಟಿಯವರ ಸಲಹೆಯ೦ತೆ ಸಂದರ್ಶಿಸಲಾ ಯಿತು.

u a e ಯ ಅತ್ಯಂತ ಜನಪ್ರಿಯ ವಾಗಿರುವ ಈ ಶಾಲೆಗಳಲ್ಲಿ ಜಗತ್ತಿನ ಎಲ್ಲ ದೇಶಗಳ ಸುಮಾರು ೧೫೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚ್ಚ ಮಟ್ಟದ ಶಿಕ್ಷಣ ಪಡೆಯುತ್ತಿದ್ದು ಮಾದರಿ ವಿದ್ಯಾ ಕೇಂದ್ರ ಗಳೆಂಬ ಹೆಸರು ಗಳಿಸಿರುತ್ತವೆ .

ಈಗಾಗಲೇ ಶಿಕ್ಷಣ ಕ್ಷೇತ್ರ ದಲ್ಲಿ ವಿದ್ಯಾನಗರಿ ಪುಣೆಯಲ್ಲಿ ಕಾವೇರಿ ವಿದ್ಯಾ ಸಮೋಹ ಗಳ ಹೆಸರಿನಲ್ಲಿ ಕನ್ನಡ ಸಂಘ ಪುಣೆ ಯಶಸ್ವಿ ಯಾಗಿ ಮೂಲ ಶಿಕ್ಷಣ ದಿಂದ ಉನ್ನತ ಉಚ್ಚ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು ಇನ್ನೊಂದು ಅಂತರಾ ಷ್ಟ್ರೀಯ ಮಟ್ಟದ ಶಾಲೆಯನ್ನು ಪ್ರಾರಂಭಿಸುವ ವಿಚಾರದಲ್ಲಿದೆ .

ಡಾ ಶೆಟ್ಟಿಯವರು ಕನ್ನಡ ಸಂಘ ಪುಣೆಯ ಪ್ರಗತಿಯ ಬಗ್ಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮುಂದಿನ ಪ್ರಗತಿ ಶೀಲ ಯೋಜನೆಗಳಿಗೆ ಶುಭ ಹಾರೈಸಿ ಹರಸಿದರು.

ಡಾ ಶೆಟ್ಟಿಯವರ ಪ್ರಗತಿಪರ ಯೋಜನೆಗಳು ಸಂಪೂರ್ಣ u a e ಯಲ್ಲಿ ಮಾತ್ರವಲ್ಲದೆ ಜಗತ್ತಿನೆಲ್ಲಡೆ ಪ್ರಶಂಸೆಗೆ ಪಾತ್ರವಾಗಿದ್ದು ತುಳು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದ್ದು ಭಾರತೀಯರಿಗೊಂದು ಆದರ್ಶಪ್ರಾಯ ವ್ಯಕ್ತಿತ್ವ ವನ್ನು ಇವರ ರೂಪದಲ್ಲಿ ಕೊಡಮಾಡಿದೆ ಎಂದರೆ ತಪ್ಪಾಗದು .

Padmashree-Dr-B.R.Shetty-1 Padmashree-Dr-B.R.Shetty-2 Padmashree-Dr-B.R.Shetty-3

Yakshagana-festival

Ramnavmi1 Ramnavmi2

Page 4 of 15← First...2345610...Last →